ವಿಕ್ರಾಂತ್ ರೋಣ’ 2ನೇ ಸಾಂಗ್ ರಿಲೀಸ್..! ಹೇಗಿದ್ದಾಳೆ ಪುಟಾಣಿ ‘ರಾಜಕುಮಾರಿ’..?
ಬೆಂಗಳೂರು: ನಟ ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ಜಗತ್ತಿನಾದ್ಯಂತ ಕನ್ನಡದ ಕಂಪನ್ನು ಹರಿಸಲು ಸಜ್ಜಾಗಿದ್ದಾರೆ. ಈಗಾಗಲೇ ‘ವಿಕ್ರಾಂತ್ ರೋಣ’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಈ ಮಧ್ಯೆ ‘ರಾ ರಾ ರಕ್ಕಮ್ಮ’ ಹಾಡಿಗೆ ರೀಲ್ಸ್ ಮಾಡೋದು ಟ್ರೆಂಡ್ ಆಗಿದೆ. ಈ ಮೂಲಕ ನಟ ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಸಿಗುತ್ತಿದ್ದು, ಈಗ ‘ವಿಕ್ರಾಂತ್ ರೋಣ’ ಸಿನಿಮಾದ 2ನೇ ಹಾಡು ರಿಲೀಸ್ ಆಗಿದೆ.
ಇದೇ ಮೊದಲ ಬಾರಿ ಕನ್ನಡ ಸಿನಿಮಾ ಒಂದು ಹಾಲಿವುಡ್ ಬಾಗಿಲು ಬಡಿದು ಸಂಚಲನ ಸೃಷ್ಟಿಸುತ್ತಿದೆ. ‘ವಿಕ್ರಾಂತ್ ರೋಣ’ ಸಿನಿಮಾ ಆಂಗ್ಲರಿಗೂ ಕನ್ನಡ ಚಿತ್ರಗಳ ತಾಕತ್ತು ತೋರಿಸಲು ಸಜ್ಜಾಗಿದೆ. ಇಂತಹ ಬಹುನಿರೀಕ್ಷಿತ ಚಿತ್ರದ 2ನೇ ಹಾಡು ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಯುಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸುನಾಮಿ ಎಬ್ಬಿಸಿದೆ. ‘ರಾ ರಾ ರಕ್ಕಮ್ಮ’ ಬಳಿಕ ಇದೀಗ ‘ರಾಜಕುಮಾರಿ’ ಹಾಡು ರಿಲೀಸ್ ಆಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳ ಕಾತುರ ಮತ್ತಷ್ಟು ಹೆಚ್ಚಾಗಿದೆ.
ಹೊಸ ಟ್ರೆಂಡ್..!
ಎಲ್ಲೆಲ್ಲೂ ‘ವಿಕ್ರಾಂತ್ ರೋಣ’ ಅಬ್ಬರ ಜೋರಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳು ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಈ ಹೊತ್ತಲ್ಲೇ ಸಿನಿಮಾದ ಮೊದಲ ಹಾಡು ಹೊಸ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ‘ರಾ ರಾ ರಕ್ಕಮ್ಮ’ ಸಾಂಗ್ ಟ್ರೆಂಡ್ ಕ್ರಿಯೇಟ್ ಮಾಡಿರುವ ಈ ಹೊತ್ತಲ್ಲೇ ‘ರಾಜಕುಮಾರಿ’ ಹಾಡು ರಿಲೀಸ್ ಆಗಿ ಎಲ್ಲರ ಮನ ಗೆದ್ದಿದೆ. ಇನ್ನು ಮತ್ತಷ್ಟು ಹಾಡುಗಳು ‘ವಿಕ್ರಾಂತ್ ರೋಣ’ ಸಿನಿಮಾ ಖಜಾನೆಯಿಂದ ಸಾಲು ಸಾಲಾಗಿ ಹೊರಬರಲು ಸಜ್ಜಾಗಿವೆಒಟ್ಟಾರೆ ಹೇಳೋದಾದರೆ ಸ್ಯಾಂಡಲ್‌ವುಡ್ ಪಾಲಿಗೆ ‘ವಿಕ್ರಾಂತ್ ರೋಣ’ ಸಿನಿಮಾ ಮತ್ತೊಂದು ಮೈಲಿಗಲ್ಲು. ಈಗಾಗಲೇ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಮತ್ತಷ್ಟು ಸಿನಿಮಾಗಳು ಇದೇ ರೀತಿ ಬ್ಲಾಕ್ ಬಸ್ಟರ್ ಹಿಟ್ ಆಗಲು ಕಾದು ಕುಳಿತಿವೆ. ಇದೀಗ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಅಂತಹದ್ದೇ ಹೊಸ ದಾಖಲೆ ಬರೆಯಲು ಸಜ್ಜಾಗಿ ನಿಂತಿದೆ. ಇದು ಸ್ಯಾಂಡಲ್‌ವುಡ್ ಸಿನಿ ಪ್ರಿಯರ ಪಾಲಿಗೆ ಸಂಭ್ರಮವೇ ಸರಿ.


No comments: